ಕಾಮರ್ಸ್

 ಮುಂಬಯಿಂದ ಪ್ರಕಟವಾಗುತ್ತಿರುವ, ಕೈಗಾರಿಕೆ ಮತ್ತು ವಾಣಿಜ್ಯ ವಿಚಾರಗಳಿಗೆ ಮೀಸಲಾದ ಇಂಗ್ಲೀಷ್ ವಾರಪತ್ರಿಕೆ. ಜಿ. ಕ್ಲಾರಿಜ್ ಅಂಡ್ ಕಂಪನಿ, ಲಿಮಿಟೆಡ್‍ನ ಮಾಲೀಕತ್ವಕ್ಕೆ ಸೇರಿದ ಈ ಪ್ರತ್ರಿಕೆ 1910 ರಲ್ಲಿ ಪ್ರಾರಂಭವಾಯಿತು. ಪತ್ರಿಕೆಯ ಪ್ರಸಾರ 5,276 (1969). ಮಾರುಕಟ್ಟೆಗಳ ಸಮೀಕ್ಷೆ ವ್ಯಾಪಾರೋದ್ಯಮಗಳ ವಿಮರ್ಶೆ, ರಾಜಕೀಯ ಆರ್ಥಿಕ ವಿಚಾರಗಳ ವಿವೇಚನೆ, ಕಂಪನಿಗಳ ವರದಿಗಳು ಮುಂತಾದವನ್ನು ಕುರಿತ ಲೇಖನಗಳೂ ಅಂಕಿ-ಅಂಶಗಳೂ ಪ್ರಕಟವಾಗುತ್ತದೆ. ರಾಯಲ್ 1/2 ಆಕಾರದಲ್ಲಿ ಸಾಮಾನ್ಯವಾಗಿ 48 ಪುಟಗಳಿರುವ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ರೂ, 2; ವಾರ್ಷಿಕ ಚಂದಾ ರೂ. 85. ವಾದಿಲಾಲ್ ಡಾಗ್ಲಿ ಈಗಿನ ಸಂಪಾದಕ. ಡಿ.ಬಿ. ಮಹಾತ್ಮೆ ಸಹಸಂಪಾದಕ.      

 (ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ